ವಿಕಿರಣದ ಉದ್ದೀಪಿತ ಉತ್ಸರ್ಜನೆಯ ಮೂಲಕ ಬೆಳಕಿನ (ವ್ಯಾಪಕವಾಗಿ ವಿದ್ಯುತ್ಕಾಂತ ತರಂಗಗಳ) ಪ್ರವರ್ಧನೆ ಎಂಬ ತತ್ತ್ವ ಆಧರಿಸಿ ರಚಿಸಿರುವ ವಿಶಿಷ್ಟ ಉಪಕರಣ. (ಲೈಟ್ ಆಂಪ್ಲಿಫಿಕೇ ಶನ್ ಬೈ ಸ್ಟಿಮ್ಯುಲೇ ಟೆಡ್ ಎಮಿಷನ್ ಆಫ್ ರೇಡಿಯೇಷನ್) ಪದಗಳ ಪ್ರಥಮಾಕ್ಷರ ಗಳನ್ನು ಸಂಯೋಜಿಸಿ ರಚಿಸಿದ ಪದವಿದು: ಲೇಸರ್. ಪ್ರಕಾಶ ರೋಹಿತದ ಮೂರೂ ವಿಭಾಗಗಳಲ್ಲಿ (ಅತಿರಕ್ತ, ಗೋಚರ, ಅತಿನೇರಿಳೆ) ಲೇಸರ್ ಕ್ರಿಯಾಶೀಲ. ಅತಿ ಕಿಷ್ಕಿಂಧ ವಿಕಿರಣ ರೋಹಿತದ ಯಾವ ಪ್ರದೇಶದಲ್ಲಿಯೂ ಇರಬಹುದಾದ ತೀವ್ರ ಏಕವರ್ಣೀ ಬೆಳಕಿನ ಆಕರವಿದು. ಇದರ ದೂಲ ಬೇರೆ ಯಾವುದೇ ಸಾಮಾನ್ಯ ರೀತಿಯಲ್ಲಿ ಉತ್ಪಾದಿಸುವ ಬೆಳಕಿನದಕ್ಕಿಂತ ಎಷ್ಟೊ ಲಕ್ಷಪಟ್ಟು ಉಜ್ಜ್ವಲ. ಅನಿಲ ಪದಾರ್ಥಗಳನ್ನು ಲೇಸರ್-ಉತ್ಪಾದಕ ಮಾಧ್ಯಮ ಗಳಾಗಿ ಬಳಸಲಾಗುವುದು. ಕಣ್ಣಿನ ಶಸ್ತ್ರಚಿಕಿತ್ಸೆ ಲೋಹ ಛೇದನೆ, ಹಾಲೊಗ್ರಫಿ ಮುಂತಾದೆಡೆ ಅತ್ಯುಪಯುಕ್ತ ಸಾಧನ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ